What is tooth decay or dental caries? ದಂತ ಕುಳಿ ಎಂದರೇನು?
Tooth decay also known as dental caries is one of the most common health problems across the world. Tooth decay causes destruction (demineralization) of the hard structures and organic matter of the tooth.
Tooth decay or dental caries begin as holes or cavities on the surface of teeth which allows for further accumulation of food particles. If left untreated, it can spread to deeper layers of the tooth. This can cause a serious problem in the form of Abscess or pus accumulation. Dental caries can be very painful and lead to tooth infection.
ದಂತ ಕುಳಿಯನ್ನು ಹುಳುಕು ಹಲ್ಲು ಎಂದೂ ಕರೆಯಲಾಗುತ್ತದೆ. ಇದು ಇಡೀ ಮಾನವ ಕುಲವನ್ನು ಕಾಡುವ ತೊಂದರೆ. ಬಾಯಿ ಅಸಂಖ್ಯ ಸೂಕ್ಷ್ಮ ಜೀವಿಗಳ ಆಗರ. ಹಲ್ಲುಗಳ ಮೇಲೆ ಆಹಾರ ಪದಾರ್ಥ ಬಹು ಕಾಲ ಇದ್ದಾಗ ಸೂಕ್ಷ್ಮ ಜೀವಿಗಳು ಅದರ ಮೇಲೆ ದಾಳಿ ಮಾಡುತ್ತವೆ. ಇದರಿಂದ ಹಲ್ಲಿನ ಹೊರಪದರದ ಮೇಲೆ ಆಮ್ಲೀಯತೆ ಉಂಟಾಗುತ್ತದೆ.
ಇದು ಹಲ್ಲು ಹುಳುಕಿನ ಮೊದಲ ಹಂತ. ಆ ಸ್ಥಳದಲ್ಲಿ ಕುಳಿ ಪ್ರಾರಂಭವಾಗುತ್ತದೆ. ನಂತರ ನಿಧಾನವಾಗಿ ಅದು ಹಲ್ಲಿನ ಇತರ ಪದರಗಳನ್ನು ಪ್ರವೇಶಿಸುತ್ತದೆ.